ಸತ್ಯಜಗಕಿದು

by Anonymous

.




ಸತ್ಯಜಗಕಿದು ಪಂಚಭೇಧವು ನಿತ್ಯ ಶ್ರೀ ಗೋವಿಂದನI
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ...

1. ಜೀವ ಈಶಗೆ ಭೇಧ ಸರ್ವತ್ರ ಜೀವ ಜೀವಕೆ ಭೇಧವುI
ಜೀವ ಜಡ ಜಡ ಜಡಕೆ ಭೇಧ ಜೀವ ಜಡ ಪರಮಾತ್ಮಗೆII

2. ಮಾನುಷೋತ್ತಮಗಧಿಪ ಕ್ಷಿತಿಪರು ಮನುಜ ದೇವ ಗಂಧರ್ವರುI
ಜಾನಪಿತ್ರಾಜಾನ ಕರ್ಮಜ ದಾನವಾರಿ ತತ್ವಾತ್ಮರುII

3. ಗಣಪ ಮಿತ್ರರು ಸಪ್ತ ಋಷಿಗಳು ವಹ್ನಿನಾರದ ವರುಣನುI
ಇನಜಗೆ ಸಮ ಸೂರ್ಯ ಚಂದ್ರರು ಮನು ಸತಿಯು ಹೆಚ್ಚು ಪ್ರವಹನುII

4. ದಕ್ಷ ಸಮ ಅನಿರುದ್ಧ ಗುರು ಶಚಿ ರತಿ ಸ್ವಾಯಂಭುವರಾರ್ವರುI
ಪಕ್ಷ ಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನುII

5. ದೇವೇಂದ್ರನಿಗಿಂದಧಿಕ ಮಹರುದ್ರದೇವ ಸಮ ಶೇಷ ಗರುಡರುI
ಕೇವಲಧಿಕರು ಶೇಷ ಗರುಡಗೆ ದೇವಿ ಭಾರತಿ ಸರಸ್ವತಿII

6. ವಾಯುವಿಗೆ ಸಮರಿಲ್ಲ ಜಗದೊಳು ವಾಯು ದೇವರೆ ಬ್ರಹ್ಮರುI
ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕ ಶಕ್ತಳು ಶ್ರೀರಮಾII

7. ಅನಂತಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನುI
ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ II

ಸತ್ಯಜಗಕಿದು ಪಂಚಭೇಧವು ನಿತ್ಯ ಶ್ರೀ ಗೋವಿಂದನII
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ...
ಶ್ರೀ ಕೃಷ್ಣನಧಿಕೆಂದು ಸಾರಿರೈ.

Written by: ಪುರಂದರ ದಾಸರು

Submitted on: March 14, 2019

© Lyrics.com