Eesha Ninna Charana Bhajane by Suprabha KV
सुप्रभा केवि
The easy, fast & fun way to learn how to sing: 30DaySinger.com
Eesha Ninna Charana Bhajane Aasheyinda Maaduvenu Dosha Rashi Naasha Maadu Shreesha Keshava ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು ದೋಶರಾಶಿ ನಾಶಮಾಡು ಶ್ರೀಶ ಕೇಶವ Sharanu Hokkenayya Yenna Marana Samayadalli Ninna Charana Smarane Karunisayya Narayana ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ Shodhisenna Bhavada Kalusha Bhodisayya Gyanavenage Baadhisuva Yamana Baadhe Bidisu Maadhava ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ Hindaneka Yonigalali Bandu Bandu Nondenayya Indu Bhavada Bandha Bidisu Thande Govinda ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ Bhrashtanenisa Beda Krishna Ishtu Maatra Bedikombe Shishtarodane Ittu Kashta Bidisu Vishnuve ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ Madananayya Ninna Mahime Vadanadalli Nudiyuvanthe Hrudayadalli Hudugisayya Madhusoodhana ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ Kavidukondu Iruva Paapa Savidu Poguvanthe Maado Javana Badheyannu Bidisu Thrivikrama ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ Kamajanaka Ninna Naama Premadinda Paaduvantha Nemavenage Paalisayya Swami Vaamana ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ Modalu Ninna Paada Pooje Odaguvanthe Maado Yenna Hrudayadolage Sadana Maado Mudhadhi Shridara ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ Husiyanaadi Hotte Horeva Vishayadalli Rasikanendu Husige Haakadiro Hrushikeshane ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ Biddu Bhavadaneka Januma Baddhanaagi Kalushadinda Geddupopa Buddhi Thoro Padmanabhane ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ Kaama Krodha Bidisi Ninna Naama Jihveyolage Nudiso Sri Mahaanubhavanaada Daamodara ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ಶ್ರೀಮಹಾನುಭಾವನಾದ ದಾಮೋದರ Pankajaaksha Neenu Yenna Manku Buddhiyannu Bidisi Kinkaranna Maadikollo Sankarshana ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ Yesu Januma Bandarenu Dasanallavenu Naanu Ghaasi Madadiru Innu Vasudevane ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ಘಾಸಿ ಮಾಡದಿರು ಇನ್ನು ವಾಸುದೇವನೇ Buddhi Shoonyanaagi Yenna Baddha Kaaya Kuhaka Manava Thiddi Hrudaya Shuddhi Maado Pradyumnane ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ Janani Janaka Neene Yendu Nenevenayya Deena Bandhu Yenage Mukthi Paalisinnu Aniruddane ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ Harushadinda Ninna Nama Smarisuvanthe Maadu Nema Irisu Charanadalli Prema Purushottama ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ Saadhu Sanga Kottu Ninna Paada Bhajane Itthu Enna Bheda Maadi Nodadiro Sri Adhokshaja ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ಭೇದಮಾಡಿ ನೋಡದಿರೊ ಹೇ ಅಧೋಕ್ಷಜ Charu Charana Thori Yenage Paarugaanisayya Konege Bhara Haakiruve Ninage Narasimhane ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ಭಾರ ಹಾಕಿರುವೆ ನಿನಗೆ ನಾರಸಿಂಹನೇ Sanchithaadi Papagalanu Kinchithaada Peedegalanu Munchithavaagi Kaledu Poreyo Swami Achyutha ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ Gnyana Bhakti Kottu Ninna Dhyanadalli Ittu Sada Heena Buddhi Bidisu Munna Shree Janardhana ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ Japa Thapa Anushtaana Villade Kupithagaamiyaada Enna Krupeya Maadi Kshamisabeku Upendrane ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ Moreya Iduvenayya Ninage Sharadhi Shayana Shubhamathiya Irisu Bhaktarolage Parama Purusha Sri Hari ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ Huttisale Beda Innu Huttisidake Paalisinnu Ishtu Maatra Bedikombe Shri Krishnane ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ Sathyavaada Naamagalanu Nithyadalli Patisuvavara Arthiyinda Salahuthiruva Kartru Keshava ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವರಿಗೆ ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ Mareyadale Hariya Naama Baredu Odhi Kelidavage Karedu Mukti Koduva Neleyaadikeshava ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ
The easy, fast & fun way to learn how to sing: 30DaySinger.com
Citation
Use the citation below to add these lyrics to your bibliography:
Style:MLAChicagoAPA
"Eesha Ninna Charana Bhajane by Suprabha KV Lyrics." Lyrics.com. STANDS4 LLC, 2024. Web. 18 Apr. 2024. <https://www.lyrics.com/lyric-lf/4886216/%E0%A4%B8%E0%A5%81%E0%A4%AA%E0%A5%8D%E0%A4%B0%E0%A4%AD%E0%A4%BE+%E0%A4%95%E0%A5%87%E0%A4%B5%E0%A4%BF/Eesha+Ninna+Charana+Bhajane+by+Suprabha+KV>.
Discuss the Eesha Ninna Charana Bhajane by Suprabha KV Lyrics with the community:
Report Comment
We're doing our best to make sure our content is useful, accurate and safe.
If by any chance you spot an inappropriate comment while navigating through our website please use this form to let us know, and we'll take care of it shortly.
Attachment
You need to be logged in to favorite.
Log In